
ಕೋಟ- ಬದಕನ್ನು ಅರ್ಥಪೂರ್ಣವಾಗಿ ರೂಪಿಸಿಕೊಳ್ಳಿ – ಎನ್ .ಆರ್ ದಾಮೋದರ ಶರ್ಮ
ಲಿಟ್ಲ್ ಸ್ಕಾರ್ಲರ್ ಪ್ರೀ ಸ್ಕೂಲ್ ಕೋಟ ವಾರ್ಷಿಕೋತ್ಸವ
ಕೋಟ: ಮಕ್ಕಳ ಪ್ರಾಥಮಿಕ ಹಂತ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ ಅದನ್ನು ಶಿಕ್ಷಣದ ಮೂಲಕ ಅರ್ಥಪೂರ್ಣವಾಗಿಸಿಕೊಳ್ಳಿ ಎಂದು ಧಾರ್ಮಿಕ ಚಿಂತಕ ಎನ್ .ಆರ್ ದಾಮೋದರ ಶರ್ಮ ಕರೆ ನೀಡಿದರು.
ಕೋಟದ ಮಾಂಗಲ್ಯ ಮಂದಿರದಲ್ಲಿ ಲಿಟ್ಲ್ ಸ್ಕಾರ್ಲರ್ ಪ್ರೀ ಸ್ಕೂಲ್ ಕೋಟ ಇದರ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಬದುಕಿನ ಆದರ್ಶ ಹಾಗೂ ಅಂತಹ ವ್ಯಕ್ತಿಗಳ ಜೀವನ ಚರಿತ್ರೆಯನ್ನು ತಿಳಿಹೇಳುವ ಕಾರ್ಯ ಪೋಷಕರು ಮಾಡಬೇಕು ಅದೇ ರೀತಿ ಮಕ್ಕಳು ಸಹ ಆದರ್ಶ ವ್ಯಕ್ತಿಗಳಂತೆ ಬದುಕಲು ಕಲಿಯಬೇಕು ಆಗ ಮಾತ್ರ ಸಮಾಜದಲ್ಲಿ ಸದೃಢವಾಗಿ ಗುರುತಿಸಿಕೊಳ್ಳಲು ಸಾಧ್ಯವಿದೆ ಎಂದರಲ್ಲದೆ ಕಷ್ಟದ ಜೀವನದ ದಾರಿ ತೊರಿಸಿ ಅತೀ ಪ್ರೀತಿ ತೊರಿಸಿ ಮಕ್ಕಳನ್ನು ದಾರಿ ತಪುö್ಪವಂತೆ ಮಾಡಬೇಡಿ ಎಂದುಪೋಷಕರಿಗೆ ಕಿವಿಮಾತು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಸ್ಕೂಲ್‌ನ ಮುಖ್ಯಸ್ಥ ಶ್ರೀಕಾಂತ ಆಚಾರ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಉದ್ಯಮಿ ದಯಾನಂದ ಆಚಾರ್,ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯೆ ಅನುಸೂಯ ಹೇರ್ಳೆ,ಪಂಚವರ್ಣ ಯುವಕ ಮಂಡಲದ ನಿಯೋಜಿತ ಅಧ್ಯಕ್ಷ ಮನೋಹರ್ ಪೂಜಾರಿ,ಕೋಟ ಮೆಸ್ಕಾಂ ಇಂಜಿನಿಯರ್ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.
ಸ್ಕೂಲ್ ನ ಮುಖ್ಯ ಶಿಕ್ಷಕಿ ವಿದ್ಯಾ ಶ್ರೀಕಾಂತ್ ಆಚಾರ್ ಪ್ರಾಸ್ತಾವನೆ ಸಲ್ಲಿಸಿದರು.ಶೈಕ್ಷಣಿಕ ವರ್ಷದ ಸಾಧಕರು ಹಾಗೂ ಕ್ರೀಡಾಕೂಟದಲ್ಲಿ ವಿಜೇತ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮವನ್ನು ಸಿಂಚನ ನಿರೂಪಿಸಿದರು.ಸಹ ಶಿಕ್ಷಕಿ ಕಲಾವತಿ ಅಶೋಕ್ ಸ್ವಾಗತಿಸಿ ವಂದಿಸಿದರು.
ಕೋಟದ ಮಾಂಗಲ್ಯ ಮಂದಿರದಲ್ಲಿ ಲಿಟ್ಲ್ ಸ್ಕಾರ್ಲರ್ ಪ್ರೀ ಸ್ಕೂಲ್ ಕೋಟ ಇದರ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಧಾರ್ಮಿಕ ಚಿಂತಕ ಎನ್ .ಆರ್ ದಾಮೋದರ ಶರ್ಮ ಉದ್ಘಾಟಿಸಿದರು. ಉದ್ಯಮಿ ದಯಾನಂದ ಆಚಾರ್,ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯೆ ಅನುಸೂಯ ಹೇರ್ಳೆ,ಪಂಚವರ್ಣ ಯುವಕ ಮಂಡಲದ ನಿಯೋಜಿತ ಅಧ್ಯಕ್ಷ ಮನೋಹರ್ ಪೂಜಾರಿ ಮತ್ತಿತರರು ಇದ್ದರು.
ಕೋಟ.ಜ.೨೭ ವಾರ್ಷಿಕೋತ್ಸವ