
ಕೋಟ : ಯಕ್ಷಗಾನ ಮೇಳದ ತಾಳ-ಮದ್ದಳೆ, ಜಾಗಂಟೆಯ ಶಬ್ಧ ಎಲ್ಲಿಯವರೆಗೆ ಕೇಳುತ್ತದೆಯೋ ಅಲ್ಲಿಯ ವರೆಗೆ ಇರುವ ಋಣಾತ್ಮಕ ಕಣಗಳ ವಿಸರ್ಜನೆಯಾಗಿ ಗ್ರಾಮದಲ್ಲಿ ಧನಾತ್ಮಕ ಕಣಗಳು ಉತ್ಪತ್ತಿಯಾಗುತ್ತದೆ ಈ ತನ್ಮೂಲಕ ಗ್ರಾಮದಲ್ಲಿ ಸುಭೀಕ್ಷೆ ಹೆಚ್ಚುತ್ತದೆ ಹಾಗಾಗಿ ಪ್ರತೀ ಗ್ರಾಮದಲ್ಲಿಯೂ ಸಂವತ್ಸರಕ್ಕೆ ಒಮ್ಮೆಯಾದರೂ ಯಕ್ಷಗಾನ ಪ್ರದರ್ಶನ ಜರಗಿದರೆ ಉತ್ತಮ ಎಂದು ಪ್ರಸಂಗಕರ್ತ, ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್ ಹೇಳಿದರು.
ಕುಂದಾಪುರ ರಾಯಪ್ಪನ ಮಠದ ಪರಿಸರದ ಶೇಷನಾಗಬನದಲ್ಲಿ ನಡೆದ ಮಡಾಮಕ್ಕಿ ಮೇಳದವರ ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ಪ್ರಸಂಗಕರ್ತ ಡಾ. ಬಸವರಾಜ್ ಶೆಟ್ಟಿಗಾರ್ರವರಿಗೆ ಗ್ರಾಮದ ಯಕ್ಷಗಾನಾಭಿಮಾನಿಗಳು ಸನ್ಮಾನಿಸಿ ಗೌರವಿಸಿದರು. ಸ್ಥಳೀಯರಾದ ಶ್ರೀಕಾಂತ್ ಹೊಳ್ಳ ಅಭಿನಂದನಾ ನುಡಿಯನ್ನು ಆಡಿದರು. ಮುಖ್ಯ ಅತಿಥಿಗಳಾಗಿ ಸ್ಥಳೀಯರಾದ ನಾಗರಾಜ ಹೊಳ್ಳ, ನಾಗಪ್ಪ ಪೂಜಾರಿ, ರಾಮ ದೇವಾಡಿಗ, ಬಾಬುರಾಯ್ ಪ್ರಭು, ಅಮೃತ ಹೊಳ್ಳ, ಮೇಳದ ಪ್ರಧಾನ ಭಾಗವತರಾದ ಗೋಪಾಲಕೃಷ್ಣ ನಾಯಕ್ ಜಂಬೂರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಪತ್ರಕರ್ತ ನಾಗರಾಜ ರಾಯಪ್ಪನಮಠ ಸ್ವಾಗತಿಸಿ ಕಾರ್ಯಕ್ರಮ ನಿರೂಪಸಿದರೆ, ಮೇಳದ ಮೆನೇಜರ್ ಸೌಡ ಭಾಸ್ಕರ್ ವಂದಿಸಿದರು. ನಂತರ ಮಡಾಮಕ್ಕಿ ಮೇಳದವರಿಂದ ಸಾವಿರಾರು ಪ್ರಯೋಗ ಕಂಡ ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್ ವಿರಚಿತ “ಮಡಾಮಕ್ಕಿ ಕ್ಷೇತ್ರ ಮಹಾತ್ಮೆ” ಅದ್ಧೂರಿಯಾಗಿ ಜರಗಿತು.
ಕುಂದಾಪುರ ರಾಯಪ್ಪನ ಮಠದ ಪರಿಸರದ ಶೇಷನಾಗಬನದಲ್ಲಿ ನಡೆದ ಮಡಾಮಕ್ಕಿ ಮೇಳದವರ ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ಪ್ರಸಂಗಕರ್ತ ಡಾ. ಬಸವರಾಜ್ ಶೆಟ್ಟಿಗಾರ್ರವರಿಗೆ ಗ್ರಾಮದ ಯಕ್ಷಗಾನಾಭಿಮಾನಿಗಳು ಸನ್ಮಾನಿಸಿ ಗೌರವಿಸಿದರು. ಸ್ಥಳೀಯರಾದ ನಾಗರಾಜ ಹೊಳ್ಳ, ನಾಗಪ್ಪ ಪೂಜಾರಿ, ರಾಮ ದೇವಾಡಿಗ ಇದ್ದರು.