
ಕೋಟ(ಸಾಸ್ತಾನ): ಭಾರತೀಯ ರಿಸರ್ವ್ ಬ್ಯಾಂಕ್ ಬೆಂಗಳೂರು, ಆರ್ಥಿಕ ಸಾಕ್ಷರತ ಕೇಂದ್ರ-ಉಡುಪಿ ಮದರ್ ಸಂಸ್ಥೆ, ರುಡ್ ಸೆಟ್-ಬ್ರಹ್ಮಾವರ, ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿ. ಮತ್ತು ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ಜಂಟಿಯಾಗಿ ಆಯೋಜಿಸಿರುವ ಹಣಕಾಸು ಸಾಕ್ಷರತ ಸಪ್ತಾಹ ಕಾರ್ಯಕ್ರಮವನ್ನು ಇತ್ತೀಚಿಗೆ ಸಾಸ್ತಾನದ ವನದುರ್ಗ ಕಾಂಪ್ಲೆಕ್ಸ್ನಲ್ಲಿ ಆಯೋಜಿಸಲಾಯಿತು.
ಹಣಕಾಸು ಸಾಕ್ಷರತೆ ಮತ್ತು ಮಹಿಳೆಯರ ಸಮೃದ್ಧಿ ಬಗ್ಗೆ ಅಂದರೆ ಮನೆಯ ಬಜೆಟ್, ಖಾತೆ ತೆರೆಯುವಿಕೆ, ಸೂಕ್ಷ÷್ಮ ಉಳಿತಾಯ, ಉಳಿತಾಯ ಮತ್ತು ಅಪಾಯ ನಿರ್ವಹಣೆ, ಮಾಸಿಕ ಉಳಿತಾಯ, ಅಪಾಯ ವೈವಿಧ್ಯೀಕರಣ, ತುರ್ತು ಯೋಜನೆ ಬೆಳವಣಿಗೆಗೆ ಸಾಲವನ್ನು ಪಡೆಯುವುದು, ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ನಿರ್ವಹಿಸುವುದು, ನಿಯಂತ್ರಿತ ಘಟಕಗಳಿಂದ ಕ್ರೆಡಿಟ್ ಪಡೆಯುವುದು, ಜವ್ಹಬ್ದಾರಿಯುತ ಸಾಲ, ಸಾಮಾಜಿಕ ಭದ್ರತಾ ಯೋಜನೆಗಳು ಇನ್ನು ಇತ್ಯಾದಿ ವಿಚಾರಗಳ ಬಗ್ಗೆ ಲೀಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಹರೀಶ್.ಜಿ ಅವರೊಂದಿಗೆ ಚರ್ಚಿಸಿ ಮಾಹಿತಿ ಪಡೆಯಲಾಯಿತು.
ಇದೇ ವೇಳೆ ಮಾಹಿತಿ ಆಧಾರಿತ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು.
ಅಮೂಲ್ಯ ಆರ್ಥಿಕ ಸಾಕ್ಷರತ ಕೇಂದ್ರ ಉಡುಪಿ ಆಪ್ತ ಸಮಾಲೋಚಕಿ ಮೀರಾ, ರುಡ್ ಸೆಟ್ ಬ್ರಹ್ಮಾವರ ನಿರ್ದೇಶಕ ಲಕ್ಶಿ÷್ಮÃಶ್, ಕೆನರಾ ಬ್ಯಾಂಕ್ ಸಾಸ್ತಾನ ಶಾಖೆಯ ಪ್ರಧಾನ ವ್ಯವಸ್ಥಾಪಕ ಪ್ರಜಿನ್ ಟಿ.ಯು ಮತ್ತು ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿರ್ದೇಶಕ ಸುದಿನ ಕೋಡಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಡುಪಿ ಆರ್ಥಿಕ ಸಾಕ್ಷರತ ಕೇಂದ್ರ ಮದರ್ ಸಂಸ್ಥೆ ತಂಡ ಸಂಯೋಜಕಿ ಅರ್ಪಿತಾ ಬ್ರಹ್ಮಾವರ ನಿರೂಪಿಸಿದರು.
ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ಮತ್ತು ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ಜಂಟಿಯಾಗಿ ಆಯೋಜಿಸಿರುವ ಹಣಕಾಸು ಸಾಕ್ಷರತ ಸಪ್ತಾಹ ಕಾರ್ಯಕ್ರಮದಲ್ಲಿ ಮಾಹಿತಿ ಆಧಾರಿತ ಪೋಸ್ಟರ್ ಅನ್ನು ಲೀಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಹರೀಶ್.ಜಿ ಬಿಡುಗಡೆಗೊಳಿಸಿದರು.
ಅಮೂಲ್ಯ ಆರ್ಥಿಕ ಸಾಕ್ಷರತ ಕೇಂದ್ರ ಉಡುಪಿ ಆಪ್ತ ಸಮಾಲೋಚಕಿ ಮೀರಾ, ರುಡ್ ಸೆಟ್ ಬ್ರಹ್ಮಾವರ ನಿರ್ದೇಶಕ ಲಕ್ಷ್ಮೀಶ್ ಮತ್ತಿತರರು ಇದ್ದರು.