“ಯುಗಾದಿ ಶುಭಾಶಯಗಳು ” ಮರಳು ಶಿಲ್ಪಾಕೃತಿ

ಶ್ರೀ ವಿಶ್ವಾವಸು ನಾಮ ಸಂವತ್ಸರದ ಹಚ್ಚಹಸುರಿನ ಇಳೆಯಲ್ಲಿ ಬೇವು ಬೆಲ್ಲದಂತಹ ಜೀವನದ ಸಂಭ್ರಮದಲ್ಲಿ ಆರಂಭದ ಹಬ್ಬ ಚಂದ್ರಮಾನ ಯುಗಾದಿ. ಸಮಸ್ತ ನಾಡಿನ ಜನತೆಗೆ ಒಳಿತಾಗಲಿ ಎಂಬ ಧ್ಯೇಯದೊಂದಿಗೆ ಶುಭಾಶಯವನ್ನು ಸಾರುವ ಮರಳು ಶಿಲ್ಪದ ರಚನೆ ‘ಸ್ಯಾಂಡ್ ಥೀಂ’ ಉಡುಪಿ, ಕಲಾವಿದರಾದ ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ ಮತ್ತು ಉಜ್ವಲ್ ನಿಟ್ಟೆಯವರಿಂದ ಕೋಟೇಶ್ವರದ ಹಳೆಅಳಿವೆ ಕಡಲ ತೀರದಲ್ಲಿ ನೆರೆದ ಜನತೆಗೆ ಮನಸೂರೆಗೊಳಿಸಿತು.
ಹಸಿರು ತಳಿರು ತೋರಣದೊಂದಿಗೆ ಮನೆಗೋಡೆ, ಮರದ ಕಳಸೆಯಲ್ಲಿ ತುಂಬಿರುವ ಅಕ್ಕಿ, ಹರಿವಾಣದಲ್ಲಿ ಬೇವು-ಬೆಲ್ಲ, ಮಾವು, ತೆಂಗಿನಕಾಯಿ, ಸಿಯಾಳ ಗೊಂಚಲಿನೊAದಿಗೆ ಈ ಕೃತಿಯು ಯುಗಾದಿ ಹಬ್ಬದ ಶುಭಾಶಯಗಳು ನಾಮಾಂಕಿತದೊAದಿಗೆ ಆಕರ್ಷಣೀಯವಾಗಿ ಮೂಡಿ ಬಂದಿದೆ.

Related Post

Leave a Reply

Your email address will not be published. Required fields are marked *