
ಐತಿಹಾಸಿಕ ಪುರಾಣ ಪ್ರಸಿದ್ಧ ಕುಂದಾಪುರ ತಾಲೂಕಿನ ಶಿರಿಯಾರ ಸಮೀಪದ ಮೆಕ್ಕೆ ಕಟ್ಟು ಶ್ರೀ ನಂದಿಕೇಶ್ವರ ದೇಗುಲದ ವಿಸ್ಮಯ ಪವಾಡ ಒಂದು ನಡೆದಿತ್ತು.
ಉಡುಪಿ ಜಿಲ್ಲೆಯ ನಂದಿಕೇಶ್ವರ ಪುರಾಣ ಪ್ರಸಿದ್ದಿ ಮತ್ತು ತನ್ನದೇ ಆದಂತಹ ಪವಾಡಗಳನ್ನು ಭಕ್ತಾದಿಗಳಿಗೆ ವಿಸ್ಮಯ ರೂಪದಲ್ಲಿ ತೋರಿಸುತ್ತಿರುವುದು ಹಿಂದಿನ ಕಾಲದಿಂದಲೂ ನಡೆದುಕೊಂಡಿದೆ. ಇತ್ತೀಚಿನ ಕೆಲವು ಘಟನೆಗಳ ಬಳಿಕ ಅದು ಸಾಬೀತಾಗಿರುವುದು ಭಕ್ತಾದಿಗಳಿಗೆ ಆಶ್ಚರ್ಯವಾಗಿದೆ.
ಕುಂದಾಪುರ ತಾಲೂಕಿನ ಶಿರಿಯಾರದ ಕಲ್ಮರ್ಗಿ ಶ್ರೀರಾಮ ಮಂದಿರದಲ್ಲಿ ನಿನ್ನೆ ರಾತ್ರಿ ಕಳ್ಳತನ ನಡೆದಿದ್ದು ಕಳ್ಳರು ರಾಮನ ಮೂರ್ತಿ ಮತ್ತು ಇನ್ನಿತರೆ ಸೊತ್ತುಗಳನ್ನು ಕದ್ದೊಯ್ದಿದ್ದಾರೆ.
ನಿನ್ನೆ ಬೆಳಿಗ್ಗೆ ಕಳವಾಗಿದ್ದರ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಡಾಗ್ ಸ್ಕ್ವಾರ್ಡ್ ಸಮೇತ ಸ್ಥಳಕ್ಕಾಗಮಿಸಿ ತನಿಖೆ ಪ್ರಾರಂಭಿಸಿದರು.
ಪವಾಡವೆಂಬಂತೆ ಡಾಗ್ ಸ್ಕ್ವಾರ್ಡ್ ಶ್ವಾನ, ಕದ್ದ ವಿಗ್ರಹ ಮತ್ತು ಇತರೆ ಸ್ವತ್ತುಗಳನ್ನು ಸ್ವಲ್ಪ ದೂರದಲ್ಲಿರುವ ಹೊಳೆಯ ಹತ್ತಿರ ಕಳ್ಳರು ಬಿಟ್ಟು ಪರಾರಿಯಾಗಿರುವುದನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದೆ.
ನಿನ್ನೆ ಸ್ಥಳೀಯ ಗ್ರಾಮ ದೇವರಾದ ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರನ ವಾರ್ಷಿಕ ಮಾರಿ ಪೂಜೆ ಇದ್ದು, ಹಾಗಾಗಿ ಇದು ನಂದಿಕೇಶ್ವರನೆ ಕಳ್ಳರನ್ನು ತಡೆದು ಮೂರ್ತಿಗಳ ರಕ್ಷಣೆ ಮಾಡಿದ್ದಾನೆ ಎಂದು ಜನ ಭಕ್ತಿಯಿಂದ ನಮಿಸಿಕೊಳ್ಳುತ್ತಿದ್ದಾರೆ.
ಭಕ್ತಿಯಿಂದ ಶ್ರೀ ನಂದಿಕೇಶ್ವರನ ನಂಬಿದರೆ ಇಂತಹ ಘಟನೆಗಳು ನಡೆಯದಂತೆ ಕಾಪಾಡುತ್ತಾನೆ ಎನ್ನುವುದು ಜನರ ನಂಬಿಕೆಗೆ ಇನ್ನಷ್ಟು ಸಾಕ್ಷಿಯಾಗಿದೆ. ಪುರಾಣ ಪ್ರಸಿದ್ಧ ದೇಗುಲಗಳ ಇಂತಹ ಪವಾಡಗಳು ಜನರನ್ನ ಮತ್ತಷ್ಟು ಜಾಗೃತಗೊಳಿಸಿದೆ.
ಸ್ನೈಪರ್ ಶ್ವಾನದ ಯಶಸ್ವಿ ಕಾರ್ಯಾಚರಣೆ, ಕಳವಾದ ವಿಗ್ರಹ ಪತ್ತೆ: ಶ್ವಾನದಳ ತಂಡವು ಸ್ಥಳಕ್ಕಾಗಮಿಸಿ ಪರಿಶೀಲಿಸಿತು. ಸ್ನೈಪರ್ ಶ್ವಾನವು ಕಳವಾದ ಸ್ಥಳವನ್ನು ಪರಿಶೀಲಿಸಿ ಅಲ್ಲಿಂದ ಸುಮಾರು 600 ಮೀಟರ್ ದೂರದ ನದಿಯ ತೀರದ ವರೆಗೆ ಓಡಿದ್ದು ಅಲ್ಲಿ ನದಿಯಲ್ಲಿ ಮುಳುಗಿಸಿಟ್ಟ ವಿಗ್ರಹ ಹಾಗೂ ಕಾಣಿಕೆ ಹುಂಡಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು.
ಕಳ್ಳರು ವಿಗ್ರಹ ಹಾಗೂ ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿ ನದಿಯ ತೀರಕ್ಕೆ ಹೊತ್ತೊಯ್ದು ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿವ ಸುಮಾರು 30 ಸಾವಿರದಷ್ಟು ಹಣ ತೆಗೆದುಕೊಂಡು ಖಾಲಿ ಹುಂಡಿ ಹಾಗೂ ರಾಮ,ಲಕ್ಷ್ಮಣ, ಸೀತೆ ಹಾಗೂ ಹನುಮಂತನ ವಿಗ್ರಹವನ್ನು ನದಿಗೆ ಎಸೆದು ಹೋಗಿದ್ದರು. ದೇವರ ಪಾಣಿ ಪೀಠವನ್ನು ಸ್ಥಳದಲ್ಲೇ ಎಸೆದಿದ್ದರು.
ಸ್ನೈಪರ್ ಶ್ವಾನವು ಕಳ್ಳರು ಹೋಗಿದ್ದ ಹಾದಿಯನ್ನು ಹುಡುಕಿಕೊಂಡು ನದಿ ತೀರಕ್ಕೆ ಬಂದು ನಿಂತಿದ್ದು ಅದರಿಂದ ಕಳವಾದ ವಿಗ್ರಹವನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.
ಸ್ನೈಪರ್ ಶ್ವಾನದ ಪತ್ತೆ ಕಾರ್ಯಾಚರಣೆಗೆ ಎಲ್ಲರೂ ಅಭಿನಂದಿಸಿದ್ದಾರೆ.