
ನಾಲ್ಕೂ ಋತುಗಳಲ್ಲಿ ವಸಂತ ಹಾಗೂ ಶರತ್ಕಾಲದ ನಡುವೆ ಬೇಸಿಗೆ ಯೆಂಬುದು ದಗೆಯ ಕಾಲವಾಗಿದೆ. ದೀರ್ಘಾವಧಿಯ ಹಗಲು ಹಾಗೂ ಅಲ್ಪಾವಧಿಯ ಇರುಳು ಬೇಸಿಗೆ ಕಾಲದ ವೈಶಿಷ್ಟ್ಯವಾಗಿದೆ. ಖಗೋಳವಿಜ್ಞಾನ ಮತ್ತು ವಲಯವಾರು ಹವಾಮಾನ ವಿಜ್ಞಾನಗಳನ್ನು ಆಧರಿಸಿ, ಋತುಗಳು ವಿವಿಧ ವಲಯಗಳಲ್ಲಿ ವಿವಿಧ ದಿನಾಂಕ ಗಳಂದು ಆರಂಭವಾಗುತ್ತವೆ. ಆದರೂ, ದಕ್ಷಿಣ ಗೋಲಾರ್ಧದಲ್ಲಿ ಬೇಸಿಗೆಯಾಗಿದ್ದರೆ ಉತ್ತರ ಗೋಲಾರ್ಧದಲ್ಲಿ ಚಳಿಗಾಲವಿರುತ್ತದೆ.ದಕ್ಷಿಣ ಗೋಲಾರ್ಧದಲ್ಲಿ ಚಳಿಗಾಲವಿದ್ದರೆ ಉತ್ತರ ಗೋಲಾರ್ಧದಲ್ಲಿ ಬೇಸಿಗೆ ಕಾಲವಿರುತ್ತದೆ.
ಬೇಸಿಗೆಯಲ್ಲಿ ನಾವು ಅನುಸರಿಸಬೇಕಾದಂತ ಕ್ರಮಗಳು ಮತ್ತು ನಮ್ಮ ಜೀವನ ಮಟ್ಟದ ಮೇಲೆ ವಿಪರೀತವಾದ ಅಂತಹ ಪ್ರತಿಕೂಲ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಬೇಸಿಗೆಯಲ್ಲಿ ಮಾನವನ ದೇಹದ ಮೇಲೆ ನೀರಿನ ಪ್ರಮಾಣ ಮತ್ತು ನೀರಿನ ಅಂಶವು ವಿಪರೀತ ವಾಗಿ ಬೇಕಾಗುತ್ತದೆ.
ಬೇಸಿಗೆಯಲ್ಲಿ ನೀರಿನ ಅಭಾವ :
ಮಾರ್ಚ್ ಮತ್ತು ಏಪ್ರಿಲ್, ಮೇ ಸಂದರ್ಭದಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ನೀರಿನ ಅಭಾವ ಹೆಚ್ಚಾಗುತ್ತದೆ. ಅಂತರ್ಜಲದ ಕೊರತೆ, ಇಂಗು ಗುಂಡಿಯ ಅಭಾವ, ಬೋರ್ವೆಲ್ ಗಳ ಅತಿಕ್ರಮಣ ಹೀಗೆ ಹತ್ತಾರು ಸಮಸ್ಯೆಗಳಿಂದ ನೀರಿನ ಮೂಲ ಜಲ ಬತ್ತಿ ಹೋಗುತ್ತಿದೆ. ಇದರಿಂದ ಪ್ರಾಣಿ ಪಕ್ಷಿ ಮಾನವನ ದೇಹದ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ನಾವು ಹೆಚ್ಚಾಗಿ ವ್ಯರ್ಥ ಮಾಡುವಂತಹ ನೀರು ನಮ್ಮ ಜೀವನದ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಕಾಡು ಪ್ರದೇಶದಲ್ಲಿ ಕಾಡಿನ ಪ್ರಾಣಿಗಳಿಗೆ ನೀರಿನ ಅಭಾವವಾದರೆ, ನಾಡಿನಲ್ಲಿ ಬದುಕುವಂತಹ ಮಾನವನಿಗೆ ನಿನ್ನಷ್ಟು ನೀರಿನ ಅಭಾವ ಉಂಟಾಗುತ್ತದೆ. ಮಳೆಗಾಲದಲ್ಲಿ ಮಳೆ ನೀರು ಕೊಯ್ಲು ಅಂತರ್ಜಲಗಳ ವೃದ್ಧಿಯನ್ನು ಅಭಿವೃದ್ಧಿಪಡಿಸಿದರೆ, ಬೇಸಿಗೆಯಲ್ಲಿ ಬೋರ್ವೆಲ್ ಗಳಲ್ಲಿ ಹೆಚ್ಚಾಗಿ ನೀರು ಬರುವುದು ಅದಲ್ಲದೆ, ಬಾವಿಮಟ್ಟದಲ್ಲಿ ನೀರುಗಳು ಮೇಲ್ಭಾಗದಲ್ಲಿ ಸದಾ ಇರುವಂತೆ ನೋಡಿಕೊಳ್ಳಬಹುದು. ಹಾಗಾದರೆ,ಮಾನವ ನಿರ್ಮಿತ ಕೆಲವು ಅಡೆತಡೆಗಳಿಂದ ಅಂತರ್ಜಲ ವೃದ್ಧಿಯಲ್ಲಿ ವಿಪರೀತ ಹೊಡೆತ ಬಿದ್ದಿದೆ.
ನಾವು ವ್ಯರ್ಥ ಮಾಡುವ ನೀರು ನಮಗೆ ಕಂಟಕ :-
ನಾವು ಹೆಚ್ಚಾಗಿ ವ್ಯರ್ಥ ಮಾಡುವಂತಹ ನೀರು ಮುಂದಿನ ಜನಾಂಗಕ್ಕೆ ಕಷ್ಟ ಸಾಧ್ಯವಾಗುತ್ತದೆ. ಬೇಸಿಗೆಯಲ್ಲಿ ನೀರಿನ ಆಹಾಕಾರದಿಂದಾಗಿ ಅದೆಷ್ಟೋ ಪ್ರದೇಶಗಳು ಅಭಿವೃದ್ಧಿ ಕಾಣದೆ ನೆನೆಗುತಿಗೆ ಬಿದ್ದಿದೆ. ಬೋರ್ವೆಲ್ ನಲ್ಲಿ ನೀರು ಕಾಣಿಸದೆ ಅಂತರ್ಜಲ ಇಂಗಿ ಹೋಗುತ್ತಿವೆ. ಜನಸಾಮಾನ್ಯರು ನೀರಿನ ಕೊರತೆಯನ್ನು ಮನಗೊಂಡು ಸೂಕ್ತವಾದ ಅಂತಹ ವ್ಯವಸ್ಥೆಯನ್ನು ಮಾಡಿಕೊಳ್ಳುವುದಲ್ಲದೆ, ನೀರಿನ ಸಮರ್ಪಕ ನಿರ್ವಹಣೆಯನ್ನು ಮಾಡಿದರೆ ಬೇಸಿಗೆ ಯಲ್ಲಿ ನೀರಿನ ಸಮಸ್ಯೆ ತಪ್ಪಿಸಬಹುದು.
ಅಂತರ್ಜಲದ ಕೊರತೆ :-
ಬಹುಮಹಡಿಯ ಕಟ್ಟಡಗಳ ನಿರ್ಮಾಣದಿಂದ, ದೊಡ್ಡ ದೊಡ್ಡ ಜಮೀನಿನಲ್ಲಿ ಕಾಂಕ್ರಿಟೀಕರಣವನ್ನು ಹೆಚ್ಚಾಗಿ ಮಾಡುವುದರಿಂದ, ಮರ ಗಿಡಗಳನ್ನು ನಾಶ ಮಾಡುವುದರಿಂದ, ಅಂತರ್ಜಲದ ಮೂಲ ಕಗ್ಗೊಲೆಯಾಗುತ್ತಿರುವುದು ಇಂದಿನ ಸಮಾಜಕ್ಕೆ ದುಸ್ತರವಾಗಿ ಪರಿಣಮಿಸಿದೆ. ನೀರು ಸದ್ಬಳಕೆ ಮತ್ತು ನೀರಿನ ಉಪಯೋಗವನ್ನು ಬೇಸಿಗೆಯಲ್ಲಿ ನಾವು ಅದರ ಕಷ್ಟವನ್ನು ನೋಡಿರುತ್ತೇವೆ. ನೀರಿನ ಅಂತರ್ಜಲದ ಹಾಗೂ ಬೋರ್ವೆಲ್ ಗಳಲ್ಲಿ ಮತ್ತು ಬಾವಿಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಕಾಣಿಸಿಕೊಂಡರೆ ಸಂಭ್ರಮ ಪಡುತ್ತೇವೆ, ಆದರೆ ಮಾನವನ ಜೀವಿತ ಅವಧಿಯಲ್ಲಿ ಮತ್ತು ಮಾನವನಿಗೆ ಸಿಗಬೇಕಾದಂತಹ ಅಂತರ್ಜಲದ ಮೂಲ ಇಂದಿನ ದಿನ ಮಾನಸದಲ್ಲಿ ಮರೀಚಿಕೆಯಾಗುತ್ತಿದೆ. ಹಾಗಾದರೆ ಮಾನವ ಮಾಡಿರುವಂತಹ ತಪ್ಪಿಗೆ ಇಂದು ನೀರನ್ನ ಬಳಸಲಾಗ ದಂತಹ ಪರಿಸ್ಥಿತಿಗೆ ನಿರ್ಮಾಣವಾಗುತ್ತಿದೆ. ಹಾಗಾದರೆ ನೀರಿನ ಅಂತರ್ಜಲದ ಕಗ್ಗೊಲೆ ಮಾಡುತ್ತಿರುವುದು ಯಾರು ಎಂದು ನಮ್ಮೊಳಗೆ ಪ್ರಶ್ನೆ ಹಾಕಿಕೊಳ್ಳಬೇಕಿದೆ.
ಕುಂದಾಪುರ ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಕೊರತೆ :
ಕುಂದಾಪುರ ತಾಲೂಕಿನ ವ್ಯಾಪ್ತಿಗೆ ಸಂಬಂಧಪಟ್ಟಂತೆ ಹಲವು ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ಈಗಾಗಲೇ ನೀರಿನ ತಲೆ ನೋವು ಪರಿಣಮಿಸಿದೆ. ದಿನ ಬಿಟ್ಟು ದಿನ ಬಿಡುತ್ತಿರುವಂತಹ ನೀರಿಗೆ ಆಹಾಕಾರ ಎದ್ದಿದೆ. ಜನರ ಜೀವನ ಮಟ್ಟ ಸುಧಾರಿಸುವಂತಹ ನಿಟ್ಟಿನಲ್ಲಿ ನೀರಿನ ಅಭಾವ ಎದ್ದು ಕಾಣುತ್ತಿದೆ. ಪ್ರತಿಯೊಬ್ಬ ನಾಗರಿಕರು ನೀರಿಗೆ ಅವಲಂಬಿತವಾದ್ದರಿಂದ ನೀರಿನ ಸಮಸ್ಯೆ ತಾಲೂಕಿನ ಬಹುತೇಕ ಗ್ರಾಮ ಪಂಚಾಯತ್ ಗಳಲ್ಲಿ ಹೇಳತೀರದು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ನೀರಿನ ಸಾಂದ್ರತೆ ಕ್ರೂಢೀಕರಣ ಸಮಸ್ಯೆಯಿಂದಾಗಿ ಮತ್ತು ಬೋರ್ವೆಲ್ ಗಳ ಸ್ಥಿತಿ ಗತಿಯನ್ನು ಅವಲೋಕಿಸಿ ಗ್ರಾಮದ ಎಲ್ಲಾ ಹಳ್ಳಿಗಳಿಗೂ ನೀರು ಬಿಡುವಂತಹ ಅವಶ್ಯಕತೆ ಎದ್ದು ಕಾಣುತ್ತದೆ. ಅದಲ್ಲದೆ ಗ್ರಾಮೀಣ ಭಾಗದ ಜನರಿಗೆ ಬಾವಿಯ ಅನುಕೂಲ ಇದ್ದರಿಂದ ಹೆಚ್ಚಾಗಿ ನೀರಿನ ಅಭಾವ
ತಲೆದೂರುವುದಿಲ್ಲ. ನೀರಿನ ಸಮರ್ಪಕ ಬಳಕೆ ಮತ್ತು ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಘಟಕಗಳನ್ನು ನಿರ್ಮಾಣ ಮಾಡಿ ಪರಿಸ್ಥಿತಿಯನ್ನ ಅವಲೋಕಸಿ, ನೀರನ್ನು ಬಿಡುವುದು ಪಂಚಾಯಿತಿಯಲ್ಲಿ ನಿರ್ಧರಿಸಬೇಕು. ವಿವಿಧ ಹಳ್ಳಿಗಳಿಗೆ ಬಿಡುವಂತಹ ನೀರಿನ ಮಟ್ಟವನ್ನ ಜನರಿಗೆ ತಿಳಿ ಹೇಳಬೇಕು. ಹೆಚ್ಚಾಗಿ ಪೋಲು ಮಾಡುವಂತಹ ಜನರಿಗೆ ನೀರಿನ ಉಪಯೋಗದ ಬಗ್ಗೆ ಗ್ರಾಮಮಟ್ಟದಲ್ಲಿ ಸಮಾಲೋಚನಾ ಸಭೆಯನ್ನು ನಡೆಸಿ ಅವಲೋಕಿಸಬೇಕು.
ಜಿಲ್ಲೆಯಾದ್ಯಂತ ಮಳೆಯ ಸರಾಸರಿ:-
ಜಿಲ್ಲೆಯಾದ್ಯಂತ ಪ್ರಸಕ್ತ ಸಾಲಿನ ವಾಡಿಕೆ ಮಳೆಯು 4,535 ಮಿ.ಮೀ. ಆಗಿದ್ದು, ವಾಸ್ತವಿಕವಾಗಿ ಇದುವರೆಗೆ 5261ಮೀ. ಮೀ ನಷ್ಟು ಮಳೆ ಬಿದ್ದಿದೆ. ಈ ಮೂಲಕ ಶೇ.16ರಷ್ಟು ಹೆಚ್ಚು ಮಳೆಯಾಗಿದೆ. ಹೀಗಾಗಿ ಸದ್ಯ ನೀರಿನ ಕೊರತೆ ಆಗುವ ಸಾಧ್ಯತೆಗಳಿಲ್ಲದಿದ್ದರೂ ಸಹ, ಅಂತರ್ಜಲ ಹಠಾತ್ತನೆ ಕುಸಿತಗೊಂಡು, ಜಿಲ್ಲೆಯ ಯಾವುದೇ ಗ್ರಾಮ ಹಾಗೂ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಹಲವಾರು ಯೋಜನೆಗಳನ್ನ ರೂಪಿಸಲಾಗಿದೆ.
ಮುಂಬರುವ ಬೇಸಿಗೆ ದಿನಗಳಲ್ಲಿ ಜನಸಾಮಾನ್ಯರಿಗೆ ಹಾಗೂ ಜಾನುವಾರು ಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಪರಿಹಾರ ಹಣ:
ಕಳೆದ ಸಾಲಿನಲ್ಲಿ ಉಂಟಾದ ಮನೆ ಹಾನಿ, ಮಾನವ ಜೀವ ಹಾನಿ, ಜಾನುವಾರು ಜೀವ ಹಾನಿ, ಬೆಳೆ ಹಾನಿ ಸೇರಿದಂತೆ ವಿವಿಧ ಹಾನಿಯ ಪರಿಹಾರ ಹಣವನ್ನು ಬಾಕಿ ಉಳಿಸಿಕೊಳ್ಳುವಂತಿಲ್ಲ ಎಂದ ಅವರು, ಮಳೆಯಿಂದ ಹಾನಿಯಾದ ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ ಹಾಗೂ ರಸ್ತೆ ದುರಸ್ತಿಗೆ ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ತ್ವರಿತವಾಗಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಜಿಲ್ಲೆಯ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಸಾಕಷ್ಟು ಮೇವನ್ನು ದಾಸ್ತಾನು ಇಟ್ಟುಕೊಳ್ಳುವಂತೆ ತಹಶೀಲ್ದಾರರುಗಳು ನೋಡಿ ಕೊಳ್ಳಬೇಕು. ಎಪ್ರಿಲ್-ಮೇ ತಿಂಗಳಲ್ಲಿ ಮೇವಿನ ಕೊರತೆಯಾಗುವ ಹಿನ್ನೆಲೆ ಯಲ್ಲಿ ಈ ತಿಂಗಳ ಅಂತ್ಯದಿಂದಲೇ ಹಸಿಮೇವನ್ನು ಬೆಳೆಯಲು ಕ್ರಮ ವಹಿಸುವಂತೆ ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಬರ ನಿರ್ವಹಣೆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಜನಸಾಮಾನ್ಯರಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರು ಗಳಿಗೆ ಮೇವಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ಪ್ರತಿ ಗ್ರಾಮಪಂಚಾಯತ್‌ನಲ್ಲೂ ಸಹ ಟಾಸ್ಕ್‌ಫೋರ್ಸ್ ಸಮಿತಿಗಳನ್ನು ರಚಿಸಿ ಬರ ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ದರಾಗಿರಬೇಕು ಎಂದರು.
ಜಿಲ್ಲೆಯ ಅಂತರ್ಜಲ ಮಟ್ಟ ಕಡಿಮೆಯಾಗುವುದನ್ನು ತಡೆಗಟ್ಟುವ ಸಲುವಾಗಿ ಹಾಗೂ ಸಮುದ್ರದ ಉಪ್ಪು ನೀರು ನದಿಯ ಸಿಹಿನೀರಿಗೆ ಸೇರದಂತೆ ಈಗಾಗಲೇ ಜಿಲ್ಲೆಯಲ್ಲಿರುವ ಎಲ್ಲಾ 666 ಕಿಂಡಿ ಆಣೆಕಟ್ಟುಗಳಿಗೆ ಹಲಗೆಗಳನ್ನು ಅಳವಡಿಸಲಾ ಗಿದೆ. ಬತ್ತಿಹೋಗಿರುವ ಸರಕಾರಿ ಬಾವಿಗಳಿಗೂ ಸಹ ಮಳೆ ನೀರಿನ ಕೊಯ್ಲನ್ನು ಅಳವಡಿಸಲು ಕೊಯಿಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಸ್ಪಷ್ಟನೆ ಮೂಡಿಸಿದೆ.
ಒಟ್ಟಾರೆಯಾಗಿ ಬೇಸಿಗೆಯಲ್ಲಿ ನೀರಿನ ಕೊರತೆಯಾಗದಂತೆ ಗ್ರಾಮ ಪಂಚಾಯಿತ್ ಗಳು ಇನ್ನಷ್ಟು ಕೆಲಸ ಮಾಡಬೇಕಿದೆ. ಬೇಸಿಗೆಯಲ್ಲಿ ನಾವು ನೀರಿನ ಸದ್ಬಳಕೆ ಮಾಡುವಾಗ ಯೋಚಿಸಬೇಕು. ವ್ಯರ್ಥವಾಗುವಂತಹ ನೀರಿಗೆ ಕಡಿವಾಣ ಹಾಕಿದರೆ ಮಾತ್ರ ಈ ಬಾರಿಯ ಬೇಸಿಗೆಯಲ್ಲಿ ಸಂಕಷ್ಟ ಪರಿಸ್ಥಿತಿ ಎದುರಿಸಬಹುದು.
ನಾವು ಬಳಸುವ ನೀರು ಈ ಬೇಸಿಗೆ ಯಲ್ಲಿ ನಮಗೆ ಶಾಪವಾಗಿ ಪರಿಣಮಿಸಬಹುದು ಎಚ್ಚರಿಕೆ….!”
– ಕೆ.ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ.