ತೆಂಕುತಿಟ್ಟಿನ ಮೇರು ಕಲಾವಿದ,ಕಟೀಲು ಮೇಳದಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ತಿರುಗಾಟ ನಡೆಸಿದ ಕೋಡಿ ಕುಷ್ಟ ಗಾಣಿಗ@ಕುಂದಾಪುರದ ಕೃಷ್ಣ ಗಾಣಿಗ (78)ಅಲ್ಪಕಾಲದ ಅಸೌಖ್ಯದಿಂದ ಇಂದು (ಗುರುವಾರ ಜೂನ್ 12 ಗುರುವಾರ) ಮಧ್ಯಾಹ್ನ ನಿಧನ.
ಕಟೀಲು ಕ್ಷೇತ್ರ ಮಹಾತ್ಮೆಯ ನಂದಿನಿ ಪಾತ್ರದ ಮೂಲಕ ಜನ ಮನ್ನಣೆ ಪಡೆದ ಇವರು ಶ್ರೀ ದೇವಿ ಮಹಾತ್ಮೆಯ ದೇವಿ ಪಾತ್ರವನ್ನು ಇಂದಿಗೂ ಯಕ್ಷಪ್ರೇಮಿಗಳ ಮನದಲ್ಲಿ ನೆಲೆಸಿದ್ದಾರೆ.
ಉಡುಪಿ ಕಲಾರಂಗ ಪ್ರಶಸ್ತಿ,ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಹಾರಾಡಿ ರಾಮ ಗಾಣಿಗ ಪ್ರಶಸ್ತಿ, ಯಕ್ಷಧ್ರುವ ಪಟ್ಲ ಪ್ರತಿಷ್ಠಾನ ಪ್ರಶಸ್ತಿ,ಡಾ.ಜಿ.ಶಂಕರ ಫ್ಯಾಮಿಲಿ ಟ್ರಸ್ಟ್ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗೆ ಭಾಜನರಾದ ಇವರ ಮೃತರ ಅಂತ್ಯ ಸಂಸ್ಕಾರ ನಾಳೆ (ಜೂನ್ 13 ಶುಕ್ರವಾರ) ಬೆಳಿಗ್ಗೆ 8.30ಕ್ಕೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.